ಒತ್ತಾಯ ಮತ್ತು ವಿಕೃತಿ: ಶಿಲ್ಪ ಮತ್ತು ಯಂತ್ರ ರಚನೆಗಳೆಂದರೆ ವಿವಿಧ ಬಲಗಳ ನಿರೋಧ, ಸಮತೋಲನ ಇತ್ಯಾದಿ. ರಚನೆಯ ಪ್ರತಿಯೊಂದು ಭಾಗವೂ ಈ ಬಲಗಳ ವ್ಯಾಪ್ತಿಗೆ ಒಳಪಡುತ್ತದೆ. ಭಾಗದ ಪ್ರತಿ ಬಿಂದುವಿನಲ್ಲಿಯೂ ಬಲಗಳ ಕ್ರಿಯೆಯಿಂದ ಉಂಟಾಗುವ ಪ್ರತಿಬಲವೇ ಒತ್ತಾಯ (ಸ್ಟ್ರೆಸ್). ಪರಿಣಾಮವಾಗಿ ಇದರ ಜೊತೆಯಲ್ಲೇ ಆ ಭಾಗದ ರೂಪದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದು ವಿಕೃತಿ (ಸ್ಟ್ರೇನ್) ಸ್ಥಿತಿಸ್ಥಾಪಕ ವಸ್ತುಗಳಲ್ಲಿ ಒತ್ತಾಯಕ್ಕೂ ವಿಕೃತಿಗೂ ನೇರ ಸಂಬಂಧವಿದೆ. ಈ ಸಂಬಂಧವನ್ನು ಒತ್ತಾಯ-ವಿಕೃತಿ ಚಿತ್ರದಲ್ಲಿ ತೋರಿಸಬಹುದು. 
ಒತ್ತಾಯ ಹಾಗೂ ವಿಕೃತಿಗಳ ಪ್ರಮಾಣವೇ ಸ್ಥಿತಿಸ್ಥಾಪಕತ್ವದ ನಿಯತಾಂಕ (ಮಾಡ್ಯುಲಸ್ ಆಫ್ ಎಲಾಸ್ಟಿಸಿಟಿ) ಅಥವಾ ಯಂಗನ ನಿಯತಾಂಕ. ಇದರ ಸಂಕೇತ . ಚಿತ್ರದಲ್ಲಿ ಈ ನಿಯತಾಂಕವನ್ನು ಒತ್ತಾಯ-ವಿಕೃತಿ ವ್ಯತ್ಯಾಸರೇಖೆಯ ಓಟ (ಸ್ಲೋಪ್) ನಿರ್ಣಯಿಸುತ್ತದೆ. ಇಲ್ಲಿ ಒತ್ತಾಯ ವಿಕೃತಿ ಸ್ಥಿತಿಸ್ಥಾಪಕತ್ವದ ನಿಯತಾಂಕಯು ರಚನಾವಸ್ತುಗಳ ಸಾಮಥರ್ಯ್‌ವನ್ನು ಅರಿಯಲು ಸಹಾಯವಾಗುತ್ತದೆ. 		 					 (ವಿ.ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ